ವನದುರ್ಗ ಕೋಟೆ ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಹಪುರ್ ತಾಲ್ಲೂಕಿನಲ್ಲಿನ ವನದುರ್ಗ ಹಳ್ಳಿಯಲ್ಲಿದೆ.ಕೋಟೆಯ ಮಹಾದ್ವಾರದ ಎರಡು ಬದಿಯಲ್ಲಿ ಐದೈದು ಸಾಲುಗಳಲ್ಲಿರುವ ಸಂಸ್ಕೃತ ಶಾಸನವು ದೇವನಾಗರಿ ಲಿಪಿಯಲ್ಲಿದೆ. ಸುರಪುರದ ದೊರೆ ಪಿಡ್ಡನಾಯಕನು ತನ್ನ ರಾಣಿ ವೆಂಕಮ್ಮಾಂಬಳ ಬಯಕೆಯಂತೆ ಈ ವನದುರ್ಗವನ್ನು ನಿರ್ಮಿಸಿದನು. ಈ ಕೋಟೆಗೆ ಬೃಹತ್ತಾದ ಪ್ರವೇಶ ದ್ವಾರಗಳಿವೆ.ಅರ್ಧ ಚಂದ್ರಾಕಾರದ ಎತ್ತರದ ಗೋಡೆಗಳು ಶತ್ರುಗಳು ಗಲಿ-ಬಿಲಿಗೊಳ್ಳುವಂತೆ ಮಾಡುತ್ತವೆ. ಕೋಟೆಯ ಒಳಗೆ ಅಧಿಕಾರಿಗಳಿಗೆ ಹಾಗೂ ಕಾವಲುಗಾರರಿಗೆ ಕಟ್ಟಿಸಿದ ವಸತಿ ಗೃಹಗಳ ಅವಶೇಷಗಳನ್ನು ನೋಡಬಹುದು. == ಉಲ್ಲೇಖಗಳು ==